Monday, September 5, 2016

*_ಬದುಕಿನ ದಾರಿಗೆ ಬೆಳಕು ತೋರಿದವರು..._*

ಇಂದು ಶಿಕ್ಷಕರ ದಿನಾಚರಣೆ_

ಶಾಲೆಯಲ್ಲಿ ಅಕ್ಷರ ಕಲಿಸಿ ಶೈಕ್ಷಣಿಕ ಪಥವನ್ನು ದರ್ಶಿಸುವವನು ಶಿಕ್ಷಕ. ಆದರೆ, ವ್ಯಕ್ತಿಯೊಬ್ಬ ಯಶಸ್ಸಿನತ್ತ ಸಾಗಲು, ಜೀವನ ಸಾರ್ಥಕಪಡಿಸಿಕೊಳ್ಳಲು ಇತರ ರಂಗದಲ್ಲೂ ಗುರುವಿನ ಬಲ ಬೇಕು. ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಮೈಲಿಗಲ್ಲುಗಳನ್ನು ಸೃಷ್ಟಿಸಿ ಗುರು ಎಂಬ ಗೌರವಕ್ಕೆ ಪಾತ್ರರಾದವರು ನಮ್ಮಲ್ಲಿ ಅಸಂಖ್ಯ. ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ, ಇಲ್ಲಿ ಪ್ರಾತಿನಿಧಿಕವಾಗಿ ಆರು ಕ್ಷೇತ್ರಗಳ ಆರು ಗುರುಗಳ ಕೊಡುಗೆ ಕುರಿತಾದ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

*ರಾಜನೀತಿಗೆ ಹೆಸರುವಾಸಿ ಚಾಣಕ್ಯ*

ರಾಜಕೀಯ ತಂತ್ರಗಾರಿಕೆಗೆ ಮತ್ತೊಂದು ಹೆಸರೇ ಚಾಣಕ್ಯ. ಶತಮಾನಗಳ ಹಿಂದೆ ಚಾಣಕ್ಯನ ಮಾರ್ಗದರ್ಶನ ಪಡೆದ ಚಂದ್ರಗುಪ್ತ, ಮೌರ್ಯ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ. ಈತನ ನೀತಿಗಳು ಚಾಣಕ್ಯನೀತಿ ಎಂದೂ, ಅರ್ಥಶಾಸವಂತೂ ಕೌಟಿಲ್ಯನ ಅರ್ಥಶಾಸ ಎಂದೇ ಪ್ರಸಿದ್ಧ. ಶತಮಾನಗಳ ಹಿಂದೆಯೇ ರೂಪಿಸಿದ್ದ ಚಾಣಕ್ಯನ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದರೆ ಆತನ ಬುದ್ಧಿಮತ್ತೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಎಷ್ಟು ವ್ಯಾಪಕವಾಗಿರಬಹುದು ಎಂಬುದನ್ನು ಅಂದಾಜಿಸಬಹುದು.  ಚಾಣಕ್ಯ ಮೂರನೇ ಶತಮಾನದಲ್ಲಿ ತಕ್ಷಶಿಲಾ ಎಂಬಲ್ಲಿ ಜನಿಸಿದ ಎಂದು ಹೇಳಲಾಗುತ್ತದೆಯಾದರೂ, ಈ ಬಗ್ಗೆ ಸ್ಪಷ್ಟತೆ ಇಲ್ಲ. ತಂದೆ ಹೆಸರು ಚಣಕ, ತಾಯಿ ಕಾನೇಶ್ವರಿ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಚಾಣಕ್ಯ, ಪುರಾತನ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಶಿಕ್ಷಕನಾದ. ನಂದ ಸಾಮ್ರಾಜ್ಯದ ನಿಜವಾದ ರಾಜನನ್ನು ಚಾಣಕ್ಯ ಹುಡುಕಲಾರಂಭಿಸಿದ. ಆ ಹುಡುಕಾಟದ ವೇಳೆ ಧನನಂದನ ಆಳ್ವಿಕೆಯಲ್ಲಿ ನಂದ ಸಾಮ್ರಾಜ್ಯ ಸುಭಿಕ್ಷವಾಗಿಲ್ಲ ಎಂಬುದನ್ನು ಅರಿತ. ಅದೇ ವೇಳೆ ಕಣ್ಣಿಗೆ ಬಿದ್ದವನೇ ಬಾಲಕ ಚಂದ್ರಗುಪ್ತ. ಆತನಿಗೆ ಆಳ್ವಿಕೆ, ಸಮಾಜಕಲ್ಯಾಣದ ಪಾಠ ಹೇಳಿ ರಾಜಕೀಯ ತಂತ್ರಗಾರಿಕೆಗಳನ್ನೂ ಧಾರೆ ಎರೆದ. ಇವೆಲ್ಲದರ ಪರಿಣಾಮವೇ ಮೌರ್ಯ ಸಾಮ್ರಾಜ್ಯ ಸ್ಥಾಪನೆ.   ಭಾರತದ ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ತಂತ್ರಗಾರಿಕೆ ವಿಷಯ ಬಂದಾಗ ನೆನಪಾಗುವುದು ಇವೇ ಚಾಣಕ್ಯ ನೀತಿಗಳು. ಹೀಗಾಗಿ, ಇಂದಿಗೂ ಇಂತಹ ತಂತ್ರಗಾರಿಕೆಗಳನ್ನು ನಡೆಸುವವರನ್ನು ‘ಅಭಿನವ ಚಾಣಕ್ಯ’ ಎಂದೋ, ಆಯಾ ಪಕ್ಷಗಳ ‘ಚಾಣಕ್ಯ’ರೆಂದೋ ಗುರುತಿಸುವುದುಂಟು.  ಆಚಾರ್ಯ ಚಾಣಕ್ಯ ಭಾರತೀಯರ ಪಾಲಿಗೆ ಒಬ್ಬ ಗುರು, ತತ್ತ್ವಶಾಸಜ್ಞ, ಅರ್ಥಶಾಸಜ್ಞ, ರಾಜಕೀಯ ಸಲಹೆಗಾರನೆಂಬ ನೆಲೆಯಲ್ಲಿ ಇಂದಿಗೂ ಪ್ರಸ್ತುತವೆನಿಸುತ್ತಾನೆ. ಹೀಗಾಗಿ ಚಾಣಕ್ಯ ಸರ್ವರಿಗೂ ಸಾರ್ವಕಾಲಿಕ ಗುರು.

*ಅಧ್ಯಾತ್ಮಕ್ಕೆ ಆಧುನಿಕತೆಯ ಸ್ಪರ್ಶ ಆಚಾರ್ಯ ರಜನೀಶ್*

‘ಆಚಾರ್ಯ ರಜನೀಶ್’, ‘ಭಗವಾನ್ ಶ್ರೀ ರಜನೀಶ್’, ‘ಓಶೋ’ ಎಂದೆಲ್ಲಾ ಕರೆಸಿಕೊಂಡ ಭಾರತದ ಪ್ರಖ್ಯಾತ ಅನುಭಾವಿಗಳಲ್ಲೊಬ್ಬರು ಚಂದ್ರಮೋಹನ್ ಜೈನ್. 1931ರ ಡಿಸೆಂಬರ್ 11ರಂದು ಜನಿಸಿ, ತತ್ತ್ವಶಾಸದ ಪ್ರಾಧ್ಯಾಪಕರಾಗಿ, 60ರ ದಶಕದಲ್ಲಿ ದೇಶಾದ್ಯಂತ ಸಂಚರಿಸಿ ಅನುಪಮ ವಾಗ್ವೈಖರಿಯಿಂದಾಗಿ ಜನರನ್ನು ಸೂಜಿಗಲ್ಲಿನಂತೆ ಸೆಳೆದ ರಜನೀಶರು, ಮಹಾತ್ಮ ಗಾಂಧಿಜಿ, ಸಾಂಸ್ಥೀಕರಿಸಲ್ಪಟ್ಟ ಧರ್ಮಗಳು ಮತ್ತು ಸಮಾಜವಾದದ ಕುರಿತಾಗಿ ನಿರ್ಭಯವಾಗಿ ಟೀಕಿಸಿ ವಿವಾದಕ್ಕೊಳಗಾಗಿದ್ದೂ ಉಂಟು. ಮುಕ್ತ ಲೈಂಗಿಕತೆ ಕುರಿತಾದ ಸಮರ್ಥನೆ, ಪ್ರತಿಪಾದನೆಗಳಿಂದಾಗಿ ‘ಸೆಕ್ಸ್ ಗುರು’ ಎಂಬ ಮೊಹರನ್ನೂ ಅವರು ಲಗತ್ತಿಸಿಕೊಳ್ಳಬೇಕಾಗಿ ಬಂತು. ಆದರೆ ತರುವಾಯದಲ್ಲಿ ‘ಓಶೋ’ ಚಿಂತನೆಗಳು ಹೆಚ್ಚೆಚ್ಚು ಜನರಿಂದ ಸ್ವೀಕಾರಾರ್ಹವಾದವು. ‘ಸಂಪ್ರದಾಯಸ್ಥ’ ಸ್ವರೂಪದಲ್ಲಿದ್ದ ಧ್ಯಾನ ಪದ್ಧತಿಗೆ ಆಧುನಿಕ ಆಯಾಮ ಕೊಟ್ಟು, ಸಂಗೀತದ ಹಿನ್ನೆಲೆಯೊಂದಿಗೆ ಧ್ಯಾನ ಆಚರಿಸುವ ವಿಶಿಷ್ಟ ವಿಧಾನವನ್ನು ಅಭಿವೃದ್ಧಿಪಡಿಸಿ ಸಾದರಪಡಿಸಿದರು. ಯಾಂತ್ರಿಕ ಮತ್ತು ಒತ್ತಡದ ಬದುಕಿನಿಂದಾಗಿ ತಲ್ಲಣ, ಖಿನ್ನತೆ, ಉದ್ವಿಗ್ನತೆಗಳ ಬಲಿಪಶುಗಳಾಗಿರುವವರು ಅಥವಾ ಯಾವುದೋ ಕಂದಾಚಾರದ ನಂಬಿಕೆಗಳಿಗೆ ಜೋತುಬಿದ್ದು ಬದುಕನ್ನು ನೀರಸವಾಗಿಸಿಕೊಂಡವರು ಹಾಸ್ಯಪ್ರಜ್ಞೆ, ಸೃಜನಶೀಲತೆ, ಪ್ರೀತಿಫವಿಶ್ವಾಸ, ಸಂಭ್ರಮಾಚರಣೆ, ಜಾಗೃತಿ, ಧೈರ್ಯ ಇತ್ಯಾದಿ ಗುಣ/ಪ್ರವೃತ್ತಿಗಳನ್ನು ಅಳವಡಿಸಿಕೊಂಡಲ್ಲಿ ಬದುಕು ಹಸನಾಗುತ್ತದೆ ಎಂಬುದನ್ನು ಸರಳಫಸುಂದರ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದು ರಜನೀಶರನ್ನು ಜನಪ್ರಿಯತೆಯ ಮುಂಚೂಣಿಯಲ್ಲಿ ನಿಲ್ಲಿಸಿತು, ಸ್ವೀಕಾರಾರ್ಹವಾಗಿಸಿತು. ಅಮೆರಿಕದ ಒರೆಗಾಂವ್, ಭಾರತದ ಪುಣೆಯಲ್ಲಿ ನಿರ್ಮಿಸಿದ ಪ್ರಮುಖ ಆಶ್ರಮಗಳಷ್ಟೇ ಅಲ್ಲದೆ, ಜರ್ಮನಿ, ಯುನೈಟೆಡ್ ಕಿಂಗ್‌ಡಂ, ಇಟಲಿ, ನೆದರ್ಲೆಂಡ್ಸ್ ನಂಥ ವಿಶ್ವದ ಇತರ ಭಾಗಗಳಲ್ಲೂ ‘ರಜನೀಶ್ ಆಂದೋಲನ’ಕ್ಕೆ ಸಮರ್ಪಿಸಿಕೊಂಡ ಸಣ್ಣಪುಟ್ಟ ಕೇಂದ್ರಗಳಿವೆ.

*ನಿಷ್ಕಾಮ ಕರ್ಮಯೋಗಿ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು*

‘ಅಭಿನವ ಧನ್ವಂತರಿ’ ಎಂದೇ ಖ್ಯಾತರಾಗಿದ್ದವರು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು. 1891ರಲ್ಲಿ ಜನಿಸಿ ಕುಮಾರಸ್ವಾಮಿ ಎಂಬ ಮೂಲನಾಮ ಹೊಂದಿದ್ದ ಇವರಿಗೆ ‘ರಾಘವೇಂದ್ರ’ ಎಂಬ ಹೆಸರಿತ್ತಿದ್ದು ಅಂದಿನ ಮಂತ್ರಾಲಯ ಯತಿಗಳು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಸ್ವಾಮಿಗಳು ಆಯುರ್ವೇದ, ಸಿದ್ಧವೈದ್ಯ, ಯೋಗಾಭ್ಯಾಸ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ್ದರ ಜತೆಗೆ ದೀನಫದಲಿತರ ಉದ್ಧಾರವನ್ನೇ ಪರಮಾತ್ಮನ ಪೂಜೆ ಎಂದು ಪರಿಗಣಿಸಿ, ಜೀವಿತಾವಧಿಯನ್ನೆಲ್ಲಾ ಇದಕ್ಕೆಂದೇ ಮೀಸಲಿಟ್ಟ ನಿಷ್ಕಾಮ ಕರ್ಮಯೋಗಿ. ಸ್ವಾಮಿ ಶಿವಾನಂದರ ಆತ್ಮೀಯ ಶಿಷ್ಯರೆನಿಸಿಕೊಂಡಿದ್ದ ಇವರು ಭಟ್ಕಳದಲ್ಲಿ ‘ಮಾರುತಿ ವ್ಯಾಯಾಮ ಶಾಲೆ’ ಸ್ಥಾಪಿಸಿದ್ದರ ಜತೆಗೆ ಹಳ್ಳಿಹಳ್ಳಿಯಲ್ಲೂ ನೈರ್ಮಲ್ಯೀಕರಣ ಮತ್ತು ಯೋಗಶಿಬಿರಗಳನ್ನು ಸಂಘಟಿಸಿ ಅರಿವು ಮೂಡಿಸಿದರು. ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮ ಸ್ಥಾಪಿಸಿ ಬಡ ಮತ್ತು ಅನಾಥ ಮಕ್ಕಳಿಗೆ ಆಶ್ರಯದಾತರಾದ ಇವರು ಶಲ್ಯ ತಂತ್ರ, ಶಾಲಾಕ್ಯ ತಂತ್ರ, ರಸಾಯನ ತಂತ್ರ, ಕಾಯ ಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸಾ ಪದ್ಧತಿಗಳಲ್ಲಿ ಪರಿಣತಿ ಸಾಧಿಸಿದ್ದರು. ‘ತಿರುಕ’ ಎಂಬ ಕಾವ್ಯನಾಮದಲ್ಲಿ ಅನೇಕ ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ. ಆಳುಗರು ‘ಪದ್ಮ’ ಪ್ರಶಸ್ತಿ ನೀಡುವ ಕುರಿತಾಗಿ, ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪ್ರದಾನಿಸುವ ಕುರಿತಾಗಿ ಪ್ರಸ್ತಾಪಿಸಿದಾಗಲೂ ಅವನ್ನೆಲ್ಲ ನಯವಾಗಿ ತಿರಸ್ಕರಿಸಿ, ‘ಸಾಮಾಜಿಕ ಚಟುವಟಿಕೆಗಳಿಗೆ ಹಣದ ಕೊರತೆ ಇದೆ, ಅದನ್ನು ನೀಡಿದರೆ ಸಾಕು’ ಎಂದ ಸಮಾಜಮುಖಿ ಇವರು. ಹತ್ತು ಹಲವು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳನ್ನು ಕಟ್ಟಿದ ಇವರು ನಿಜಾರ್ಥದಲ್ಲಿ ಪ್ರಾತಃಸ್ಮರಣೀಯರು. ‘ಸದ್ಗುರು’ ಜಗ್ಗಿ ವಾಸುದೇವ್ ಅವರಿಗೆ ಮೊಟ್ಟಮೊದಲಿಗೆ ಯೋಗಾಭ್ಯಾಸ ಹೇಳಿಕೊಟ್ಟವರು ಇವರೇ. ಹೃದಯಾಘಾತಕ್ಕೊಳಗಾಗಿ 1996ರ ಆಗಸ್ಟ್ 31ರಂದು ಇಹಲೋಕ ತ್ಯಜಿಸಿದರು.

*ಶಿಷ್ಯರ ಬಾಳಿನ ದೀವಿಗೆ ಪಂಡಿತ್ ಪುಟ್ಟರಾಜ ಗವಾಯಿಗಳು*

ಗುರು ಎಂಬ ಪದಕ್ಕೆ ಅನ್ವರ್ಥನಾಮದಂತಿದ್ದವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ್ ಪುಟ್ಟರಾಜ ಗವಾಯಿಗಳು. ಅವರು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತವೆರಡರಲ್ಲೂ ಪಾರಂಗತರಾಗಿದ್ದರು. ಅನೇಕ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸಬಲ್ಲ ವರಾಗಿದ್ದರು. ನೂರಾರು ಅಂಧ, ಅನಾಥ ಮಕ್ಕಳಿಗೆ ಜೀವನದ ಬೆಳಕಾದರು. ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಲಕ್ಷಾಂತರ ಅಸಹಾಯಕ ಮಂದಿಗೆ ವಿದ್ಯೆಯನ್ನು ಧಾರೆ ಎರೆದರು. ಸಂಗೀತ, ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ ಶ್ರೀವೀರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿದರು. ಪಂಡಿತ್ ಎಂ.ವೆಂಕಟೇಶ ಕುಮಾರ್, ಬಸವರಾಜ್ ಗೋನಾಳ, ಡಿ.ಕುಮಾರದಾಸ್, ಫಕೀರೇಶ ಕಣವಿ, ಶಿವರಾಜ ಗವಾಯಿ, ಸಿದ್ಧರಾಮ ಗವಾಯಿ ಮತ್ತಿತರರು ಪುಣ್ಯಾಶ್ರಮದಲ್ಲಿಯೇ ಅಭ್ಯಾಸ ಮಾಡಿ ಖ್ಯಾತಿಗೆ ಒಳಗಾದವರಲ್ಲಿ ಪ್ರಮುಖರು.  ಕನ್ನಡದ ಮೇರುನಟ ಡಾ.ರಾಜಕುಮಾರ್ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೂರು ತಿಂಗಳು ಇದ್ದು ಪುಟ್ಟರಾಜ ಗವಾಯಿ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಆಶ್ರಮವು ಸಂಗೀತ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದೆ. ಪದ್ಮಭೂಷಣ, ಕಾಳಿದಾಸ ಸಮ್ಮಾನ್, ಹಿಂದಿಯಲ್ಲಿ ರಚಿಸಿದ ‘ಬಸವ ಪುರಾಣ’ಕ್ಕಾಗಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರಿಂದ ಸತ್ಕಾರ... ಹೀಗೆ ಹಲವಾರು ಗೌರವಗಳಿಗೆ ಪಾತ್ರರಾದರು. 1914ರ ಮಾರ್ಚ್ 3ರಂದು ಹಾನಗಲ್ ತಾಲೂಕಿನ ದೇವರಹೊಸಪೇಟೆಯಲ್ಲಿ ಜನಿಸಿದ ಪುಟ್ಟರಾಜರು 2010ರ ಸೆ. 17ರಂದು ಲಿಂಗೈಕ್ಯರಾದರು.

*ಕಾರ್ಪೋರೇಟ್ ಮಾಂತ್ರಿಕ ಸಿ, ಕೆ, ಪ್ರಹ್ಲಾದ್*

ಕಾರ್ಪೋರೇಟ್ ಗುರು ಎಂದೆನಿಸಿಕೊಳ್ಳುವ ವಿರಳರ ಸಾಲಿನಲ್ಲಿದ್ದವರು ಸಿ.ಕೆ.ಪ್ರಹ್ಲಾದ್ ಅರ್ಥಾತ್ ಕೊಯಂಬತ್ತೂರು ಕೃಷ್ಣರಾವ್ ಪ್ರಹ್ಲಾದ್.  ಅದು 1990ರ ದಶಕದ ಕಾರ್ಪೊರೇಟ್ ವಿಚಾರ. ನಷ್ಟದಲ್ಲಿದ್ದ ಫಿಲಿಪ್ಸ್‌ನ ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್‌ಗೆ ಮರುಜೀವ ತುಂಬುವ ಕೆಲಸ ಆಗಬೇಕಾಗಿತ್ತು. ಆ ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷ/ನಿರ್ದೇಶಕರಾಗಿದ್ದ ಜಾನ್ ಟಿಮ್ಮರ್‌ಗೆ ಸೂಕ್ತ ಸಲಹೆಗಳನ್ನು ನೀಡಿ, ಕಾರ್ಪೋರೇಟ್ ತಂತ್ರಗಾರಿಕೆಗಳನ್ನು ಅಳವಡಿಸುವಂತೆ ಸಿ.ಕೆ.ಪ್ರಹ್ಲಾದ್ ಸೂಚಿಸಿದ್ದರು. ಈ ಕಾರ್ಯಯೋಜನೆಗೆ ‘ಆಪರೇಷನ್ ಸೆಂಚೂರಿಯನ್’ ಎಂದು ಹೆಸರಿಸಲಾಗಿತ್ತು. ಇದರ ಪರಿಣಾಮ ನಂತರದ ಎರಡು ಮೂರು ವರ್ಷದ ಅವಧಿಯಲ್ಲಿ ಆ ಕಂಪನಿ ನಷ್ಟದಿಂದ ಚೇತರಿಸಿಕೊಂಡು ಪ್ರಗತಿಪಥದಲ್ಲಿ ಹೆಜ್ಜೆ ಹಾಕಿತ್ತು. ಈ ಘಟನೆಯ ಬಳಿಕವೇ ಇವರು ಕಾರ್ಪೋರೇಟ್ ಗುರು ಎಂಬ ಖ್ಯಾತಿ ಪಡೆದರು. ಜಾಗತಿಕ ಚಿಂತಕರ ಚಾವಡಿಯಲ್ಲಿ ಪ್ರಭಾವಿ ಎಂದು ಗುರುತಿಸಿಕೊಂಡ ಇವರು, 1977ರಿಂದ 2010ರವರೆಗೆ ಮಿಷಿಗನ್ ವಿಶ್ವವಿದ್ಯಾಲಯದ ಸ್ಟೀಫನ್ ಎಂ.ರೋಸ್ ಸ್ಕೂಲ್ ಆಫ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿ, ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಈ ಬಿಸಿನೆಸ್ ಸ್ಕೂಲ್‌ನಲ್ಲಿ ‘ಸಿ.ಕೆ.ಪ್ರಹ್ಲಾದ್ ಇನಿಷಿಯೇಟಿವ್’ ಎಂಬ ವಿಭಾಗವನ್ನೇ ತೆರೆಯಲಾಗಿದೆ.  ಕಾರ್ಪೋರೇಟ್ ತಂತ್ರಗಾರಿಕೆಗೆ ಸಂಬಂಧಿಸಿದ ಅನೇಕ ಪುಸ್ತಕಗಳ ಸಹ ಲೇಖಕರೂ ಹೌದು. ಪ್ರಹ್ಲಾದ್ ಮೂಲತಃ ತಮಿಳುನಾಡಿನವರು. 1941ರಲ್ಲಿ ಕೊಯಂಬತ್ತೂರಿನಲ್ಲಿ ಜನಿಸಿದರು. ಮದ್ರಾಸ್ ಯೂನಿವರ್ಸಿಟಿಯಿಂದ ಭೌತಶಾಸದಲ್ಲಿ ಪದವಿ ಪಡೆದ ಬಳಿಕ  ಇಂಡಿಯನ್ ಇನಿಸ್ಟಿಟ್ಯೂಟ್ ಆಫ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ನಿಂದ ಬಿಸಿನೆಸ್ ಅಡ್‌ಮಿನಿಸ್ಟ್ರೇಷನ್ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದರು. ಅವರು 2010ರಲ್ಲಿ 68ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಆದಾಗ್ಯೂ, ಅವರ ಕಾರ್ಪೋರೇಟ್ ಚಿಂತನೆಗಳು ಚಿರಸ್ಥಾಯಿಯಾಗಿ ಉಳಿದಿವೆ.

*ಭಾರತದ ಬ್ಯಾಡ್ಮಿಂಟನ್ ಗುರು ಗೋಪಿಚಂದ್*

ಭಾರತದ ಬ್ಯಾಡ್ಮಿಂಟನ್ ಕ್ರೀಡಾ ರಂಗವನ್ನು ಒಲಿಂಪಿಕ್ಸ್ ಪದಕದ ಮೂಲಕ ಉನ್ನತ ಮಟ್ಟಕ್ಕೇರಿಸಿದ ಕೀರ್ತಿ ಕೋಚ್ ಪುಲ್ಲೇಲ ಗೋಪಿಚಂದ್ ಅವರದ್ದು. ಬ್ಯಾಡ್ಮಿಂಟನ್ ಆಟಗಾರನಾಗಿ ಮಾಡಲಾಗದ ಸಾಧನೆಯನ್ನು ಓರ್ವ ಗುರುವಾಗಿ ಅವರು ಮಾಡಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್‌ರ ಮಹೋನ್ನತ ಗೆಲುವುಗಳ ಹಿಂದಿನ ಶಕ್ತಿ ಗೋಪಿಚಂದ್. ವೃತ್ತಿ ಜೀವನದಲ್ಲಿ ಆಟಗಾರನಾಗಿ ಔನ್ನತ್ಯಕ್ಕೇರುವ ಕನಸು ಕಂಡಿದ್ದ 42 ವರ್ಷದ ಗೋಪಿಚಂದ್‌ಗೆ ಗಾಯ, ಬಡತನ, ಉತ್ತಮ ಮಟ್ಟದ ಮಾರ್ಗದರ್ಶನದ ಕೊರತೆ ಇತ್ತು. ಹಾಗಿದ್ದರೂ, 2001ರಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆದರೆ, ಈ ಯಶಸ್ಸು ಬಹುಕಾಲ ಉಳಿಯಲಿಲ್ಲ, ಬ್ಯಾಡ್ಮಿಂಟನ್‌ಗೆ ನಿವೃತ್ತಿ ನೀಡಿ 27ನೇ ವಯಸ್ಸಿನಲ್ಲೇ ಕೋಚ್ ಆಗುವ ದಿಟ್ಟ ನಿರ್ಧಾರ ಮಾಡಿದರು. ಆಟಗಾರನಾಗಿ ಗೆಲ್ಲಲಾಗದ ಒಲಿಂಪಿಕ್ ಪದಕವನ್ನು ಗುರುವಾಗಿ ಗೆಲ್ಲುವ ಛಲ ಮೂಡಿತ್ತು. ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸುವ ಸಲುವಾಗಿ ಕಾರ್ಪೋರೇಟ್ ಕಂಪನಿಗಳ ನೆರವಿಗೆ ಕೈಚಾಚಿದ್ದ ಗೋಪಿಚಂದ್‌ಗೆ ಸಿಕ್ಕಿದ್ದು ನಿರಾಸೆ ಮಾತ್ರ. ಕೊನೆಗೂ 2004ರಲ್ಲಿ ಮನೆಯನ್ನು ಅಡವಿಟ್ಟು ಅಕಾಡೆಮಿ ಆರಂಭಿಸಿದರು. ಅಂದು ಕೇವಲ 25 ಮಕ್ಕಳಿದ್ದರು. 8 ವರ್ಷದ ಸಿಂಧು ಕಿರಿಯವಳಾಗಿದ್ದರೆ, 15 ವರ್ಷದ ಪಿ.ಕಶ್ಯಪ್ ಅಕಾಡೆಮಿಯ ಹಿರಿಯ ಷಟ್ಲರ್ ಆಗಿದ್ದರು. ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಕೂಡ ಆಗಿರುವ ಗೋಪಿಚಂದ್ 2012ರಲ್ಲಿ ಸೈನಾ ನೆಹ್ವಾಲ್ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಒಲಿಂಪಿಕ್ಸ್ ಪದಕ ಗೆಲ್ಲಿಸಿಕೊಟ್ಟಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ಪ್ರೀತಿಯ ಶಿಷ್ಯೆ ಸಿಂಧು ಮೂಲಕ ಇನ್ನೊಂದು ಪದಕ ಗೆಲ್ಲಿಸಿಕೊಟ್ಟಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್‌ಗೆ ಹೊಸ ದಿಕ್ಕು ತೋರಿದ ಪ್ರೇರಕ ಗುರು ಇವರು.

📰 ವಿಜಯವಾಣಿ

Tuesday, March 1, 2016

ಇಂಗ್ಲಿಷ್ ಮಾಯೆ

ಹಣೆಬರಹ ?? !! 😳

👴ರಂಗಣ್ಣ ಎಂಬ ಅಶಿಕ್ಷಿತ, ಬಡವ ದೇವಸ್ಥಾನವೊಂದರಲ್ಲಿ
🔔ಗಂಟೆ ಹೊಡೆಯುವ ಕೆಲಸಕ್ಕೆ ಸೇರಿಕ್ಕೋಳ್ಳುತ್ತಾನೆ.
ಶ್ರದ್ದೆಯಿಂದ ಆ ಕೆಲಸ ಮಾಡುತ್ತಿದ್ದ ಆತ 🔔👴'ಗಂಟೆ ರಂಗಣ್ಣ'
ಎಂದೇ ಜನಪ್ರಿಯನಾಗುತ್ತಾನೆ.

ಕಾಲಾಂತರದಲ್ಲಿ ಆ
ದೇವಾಲಯ ದೊಡ್ಡ ಕ್ಷೇತ್ರವಾಗಿ
ಹೊರರಾಜ್ಯದವರು,ವಿದೇಶಿಗರೆಲ್ಲ ಭೇಟಿನೀಡತೊಡಗಿದರು.
ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕಾರಣ ಆಡಳಿತ
ಮಂಡಳಿಯ ಆದಾಯವು ಹೆಚ್ಚತೊಡಗಿತು. ಆಧುನಿಕ
ಬದಲಾವಣೆಗಳು ಆದವು.
ಒಂದು ದಿನ ಆಡಳಿತ ಮಂಡಳಿಯವರು 👴ರಂಗಣ್ಣನನ್ನು ಕರೆಸಿ
'ಆದಷ್ಟು ಬೇಗ ಇಂಗ್ಲಿಷ ಕಲಿತುಕೋ' ಎಂದರು. ನನಗೆ
ಅಕ್ಷರವೇ ಬರೋದಿಲ್ಲ, ಇಂಗ್ಲೀಷ ಹೇಗೆ ಕಲಿಯಲಿ?
ಎಂದು ರಂಗಣ್ಣ ಆತಂಕ ವ್ಯಕ್ತಪಡಿಸಿದ.

ಹೊರಗಿನ ಭಕ್ತರ
ಸಂಖ್ಯೆ ಹೆಚ್ಚುತ್ತರುವದರಿಂದ ದೇವಸ್ತಾನದ
ಪ್ರತಿಯೊಬ್ಬರು ಇಂಗ್ಲೀಷ
ಕಲಿಯಲೇಬೇಕು ಎಂದು ತಾಕೀತು ಮಾಡಿದರು.
ರಂಗಣ್ಣ ಅವರಿವರನ್ನು ಹಿಡಿದು 🔡ಇಂಗ್ಲಿಷ
ಕಲಿಯಲು ಯತ್ನಿಸಿದರು ಒಂದಕ್ಷರವು ತಲೆಗೆ ಹತ್ತಲಿಲ್ಲ.
ಪರಿಣಾಮ ಅವನನ್ನು ಕೆಲಸದಿಂದ ಕಿತ್ತೊಗೆದರು.ರಂಗಣ್ಣ
ದಿಕ್ಕು ಕಾಣದೆ ದೇವಸ್ಥಾನದ ಹೊರಬೀದಿಯಲ್ಲಿ
ಚಿಂತಿಸುತ್ತ ಹೊರಟ.
ತಲೆ ನೋಯಿಸುತ್ತಿದ್ದುರಿಂದ☕
ಚಹಾ ಕುಡಿಯಬೇಕೆನಿಸಿತು. ಅರ್ಧ ಕಿ.ಮೀ ಬೀದಿಯ ಎರಡು ಕಡೆ
ಕಾಣುತ್ತಿದ್ದಿದ್ದು 💐🍒🍇ಹೂವು-ಹಣ್ಣು, ತೆಂಗಿನಕಾಯಿ-ದೇವರ
ಫೋಟೊಗಳು ಅಂಗಡಿ. ಎಲ್ಲೂ ಚಹಾ ಸಿಗದಿದ್ದಾಗ "ಅಲ್ಲಿಗೆ
ಬರುವ ಲಕ್ಷಾಂತರ ಭಕ್ತರು ಚಹಕ್ಕಾಗಿ
ಎಷ್ಟು ಪರದಾಡಬಹುದೆಂದು ವಾಸ್ತವದ ಅರಿವಾಯಿತು"
ಮರುದಿನ ಅದೇ ಓಣಿಯಲ್ಲಿ ಪುಟ್ಟ ☕ಚಹಾ ಅಂಗಡಿ
ಪ್ರಾರಂಭಿಸಿದ.
ಕ್ರಮೇಣ ಆತನ ಹೆಂಡತಿ ಸಣ್ಣಪುಟ್ಟ ತಿಂಡಿ-
ತಿನಿಸು ಮಾಡಿಡತೊಡಗಿದಳು. 🏠ಗೂಡಂಗಡಿ-
ಕ್ಯಾಂಟೀನಾಗಿ, ದರ್ಶಿನಿಯಾಗಿ ಮುಂದೆ ಸ್ಟಾರ್
ಹೋಟೆಲ್ಲಾಯಿತು. ಅಷ್ಟಕ್ಕೆ ನಿಲ್ಲಿಸದೇ ಹಲವೆಡೆ
ನಾಲ್ಕಾರು ಪ್ರತ್ಯೇಕ ಹೋಟೆಲ್ಲುಗಳನ್ನು ಪ್ರಾರಂಬಿಸಿ
ಕಾಲಾಂತರದಲ್ಲಿ ರಾಜ್ಯದ ಪ್ರಸಿದ್ದ ಹೋಟೆಲ್ ಉದ್ಯಮಿ
ಎನಿಸಿಕೊಂಡ ಒಂದು ದಿನ ಹೊರರಾಜ್ಯದ ಉದ್ಯಮಿಯೊಬ್ಬ
ತನ್ನ ರಾಜ್ಯದಲ್ಲಿ 🏢ಸ್ಟಾರ್ ಹೋಟೆಲ್
ಪ್ರಾರಂಭಿಸಲು ರಂಗಣನನ್ನು ಪಾಲುದಾರನನ್ನಾಗಿ
ಮಾಡಿಕ್ಕೊಳ್ಳಲು ಬಂದ. ಮಾತುಕತೆ ನಡೆಯಿತು. ರಂಗಣ್ಣ
ಒಪ್ಪಿದ. ಒಪ್ಪಂದ ಪತ್ರಕ್ಕೆ ಸಹಿಹಾಕಬೇಕಾಗಿ ಬಂದಾಗ
ರಂಗಣ್ಣ ಎಡಗೈ ಹೆಬ್ಬೆಟ್ಟನ್ನು ಮುಂದುಮಾಡಿದ.
ದಿಗ್ಬ್ರಾಂತನಾದ ಎದುರಿನ ವ್ಯಕ್ತಿ 'ಸಹಿ
ಹಾಕುವಷ್ಟು ಇಂಗ್ಲೀಷ ಬರುವದಿಲ್ಲವೇ?'
ಎಂದು ಪ್ರಶ್ನಿಶಿದ. ಕನ್ನಡದಲ್ಲೇ ಬರೆಯಲು ಬಾರದ ತನಗೆ
ಇಂಗ್ಲೀಷ ಎಲ್ಲಿಂದ ಬರಬೇಕು ಎಂದು ರಂಗಣ್ಣ ಸಹಜವಾಗಿ
ಉತ್ತರಿಸಿದ. ಆಗ ಎದುರಿನವ ಭಾಷೆಯೇ ಬಾರದೆ
ಇಷ್ಟೆಲ್ಲಾ ಸಾಧನೆ ಮಾಡಿದ್ದಿರಿ, ನೀವೆನಾದ್ರೂ ಸರಿಯಾಗಿ
ಇಂಗ್ಲೀಷ ಕಲಿತಿದ್ರೆ ದೇಶವನ್ನೆ ಆಳುತ್ತಿದ್ದಿರಿ
ಎಂದು ಪ್ರಶಂಸಿಸಿದ.
ರಂಗಣ್ಣ ಮೆಲ್ಲಗೆ ನಿಮ್ಮದು ತಪ್ಪು ಕಲ್ಪನೆ. " ಒಂದೊಮ್ಮೆ
ನನಗೆ ಇಂಗ್ಲೀಷ ಬಂದಿದ್ದರೆ 🏯ದೇವಸ್ತಾನದಲ್ಲಿ ಇನ್ನು ಗಂಟೆ
🔔ಬಾರಿಸುತ್ತಲೆ ಇರುತ್ತಿದ್ದೆ " 

😊👆👍

Sunday, February 28, 2016

ವಿಚಿತ್ರ ವಾಸ್ತವ ಸತ್ಯಗಳು

ವಿಚಿತ್ರ ವಿಶ್ವದ ವಾಸ್ತವ ಸತ್ಯಗಳು

🔹ರಸ್ತೆಗಳು ವಿಶಾಲವಾಗಿವೆ, ಆದರೆ
      ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ, ಆದರೆ
     ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,
      ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
🔹ಅನುಕೂಲಗಳು ಹೆಚ್ಚಿವೆ, ಆದರೆ
     ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ
      ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ
      ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,
      ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,
     ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ, ಆದರೂ
     ನೆಮ್ಮದಿಯಿಂದ ಜೀವಿಸುತ್ತಿಲ್ಲ.
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ
     ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,
     ಬೆಳಿಗ್ಗೆ ತುಂಬ ಬಳಲುತ್ತೇವೆ
🔹ಕಡಿಮೆ ಓದುತ್ತೇವೆ,
      ತುಂಬ ಟೀವಿ ನೋಡುತ್ತೇವೆ:
🔹ತೋರಿಕೆಯ ಭಕ್ತಿ ಜಾಸ್ತಿ,
      ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ
      ನಮ್ಮ ಮೌಲ್ಯಗಳು ಕುಸಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ
      ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ
      ಸುಳ್ಳು  ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,
      ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ,
     ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು 
     ಭೇಟಿಯಾಗಲು ಹೋಗುವುದಿಲ್ಲ.
🔹ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ,
      ಆದರೆ ಅಂತರಂಗದಲ್ಲಿ  ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ,
     ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ
      ಗೋಚರವಾಗುವುದಿಲ್ಲ.
🔹ಬರವಣಿಗೆ ಹೆಚ್ಚಾಗಿದೆ, ಆದರೆ
      ಅರಿವು ಕಡಿಮೆಯಾಗಿದೆ!
🔹ಹೆಚ್ಚು ಆಲೋಚಿಸುತ್ತೇವೆ, ಆದರೆ
     ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ  ಸುಧಾರಿಸಿದೆ,ಆದರೆ
     ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ, ಆದರೆ
      ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
🔹ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ,
      ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಗಂಡ ಹೆಂಡಿರ  ದುಡಿಮೆ ಹೆಚ್ಚಾಗಿದೆ,
     ಆದರೆ ಸಂಬಂಧಗಳು ಛಿದ್ರಗೊಂಡು
     ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ
     ಮನಶ್ಯಾಂತಿ  ಮುರಿದುಬಿದ್ದಿದೆ.
🙏🙏🙏🙏🌻🌻💐💐🙏🙏

Thursday, February 25, 2016

ಅಮ್ಮ

ಅಮ್ಮ’ ಎಂಬ ಕರೆ ಪ್ರೀತಿಯ ಪ್ರತೀಕ. ಅದು ಬರಿಯ ಎರಡು ಅಕ್ಷರಗಳ ಜೋಡಣೆ ಮಾತ್ರವಾಲ್ಲ; ಅದು ಒಂದು ಅಪೂರ್ವ ಅನುಭವ ನೀಡುವ `ಮಾಂತ್ರಿಕ’ ಕರೆ! ಈ ಶಬ್ದದಲ್ಲಡಗಿರುವ ಅಪಾರ ಪ್ರೀತಿಯ ಪ್ರವಾಹದಿಂದ ಹರಿದು ಬಂದ ಆನಂದದ ಮುಂದೆ ಬೇರೆಲ್ಲವೂ ಕಿರಿದಾಗಿಯೇ ಕಾಣಿಸುವುದು. ಅಕ್ಷರ ಮಾಲೆಯ ಮೊದಲನೆಯ ಅಕ್ಷರವೇ `ಅ’. ಮಗುವು ಕಲಿಯುವ ಮೊದಲ ಮಾತೇ `ಅಮ್ಮ’ ಎಂದು `ಅ’ಕಾರದಿಂದಲೇ ಪ್ರಾರಂಭವಾಗುವುದು. ಹೀಗೆ ಅದೇನೋ ಚಮತ್ಕಾರ `ಅ’ಕಾರದಲ್ಲಿ ಅಡಗಿದಂತಿದೆ!
`ಅಮ್ಮ’ ಎಂದು ಕರೆಯುವಾಗ ಮಗುವಿಗೆ ವ್ಯಾಕರಣ ಮತ್ತು ಅಕ್ಷರ ಮಾಲೆಯ ಗಂಧವಿರುವುದಿಲ್ಲ; ಶಬ್ದ ಜೋಡಣೆಯ ಅಂದವೂ ತಿಳಿದಿರುವುದಿಲ್ಲ. ಆದರೂ ಅದಾವುದೋ ಒಂದು ಅವ್ಯಕ್ತ ಅಂತರಂಗ ಪ್ರೇರಣೆಯೇ ಮಗುವನ್ನು ಹಾಗೆ ಕರೆಯವಂತೆ ಮಾಡುತ್ತದೆ. `ಅಮ್ಮ’ ಎಂಬ ಶಬ್ದದಿಂದ ಮೂಡಿ ಬಂದ ಮಮತೆಯೇ ಈ ಪ್ರೇರಣೆಗೆ ಕಾರಣ. `ಅ’ಕಾರವು ಕಂಠದಿಂದ ಉದ್ಭವಿಸುವ ಚೈತನ್ಯದ ಸಂಕೇತವಾಗಿದೆ. ಮುಂದೆ ಮ-ಮ ಕೂಡಿದ ಒತ್ತಕ್ಷರ `ಮ್ಮ’ ಸೇರಿ ಮಮ-ತೆಯನ್ನೇ ಸೂಸುತ್ತ `ಅ’ ಸ್ವರದಿಂದಲೇ `ಅಮ್ಮ’ ಎಂದು ಕೊನೆಗೊಳ್ಳುತ್ತದೆ. ಅಂತರಾಳದಿಂದ ಹುಟ್ಟಿ ಬಂದ ಮಗುವಿನ ಪ್ರೀತಿಯು `ಅಮ್ಮ’ ಎಂಬ ಅಕ್ಕರೆಯ ಕರೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ.
`ಅಮ್ಮ’ ಎಂಬ ಶಬ್ದದಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿಯ ನೆಲೆಯನ್ನು ಅಳೆಯುವ ಸಾಮರ್ಥ್ಯವನ್ನು ಯಾವ ಗ್ರಂಥವೂ ಪಡೆದಿಲ್ಲವೋ ಏನೋ! ಅದು ನೀಡುವ ಅನುಭವವೇ, ಅನಂತವಾದ ಅಮೃತ ಕಡಲಲ್ಲಿ ತೇಲಾಡುವ ಅತ್ಯಾನಂದ!

ನಮ್ಮ ಭಾರತ

ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು,

ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು.

ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.

೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು...ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ
ಹೆಸರಿಸಿದ್ದಾರೆ.

Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗೃಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ #ನವಗೃಹ ಎಂದು ಹೆಸರಿಸಿದ್ದಾರೆ.

ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.

ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.

Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.

ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ.....ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ....
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು....ಪುರಾವೆ ಇದೆ....ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ.....😳 😳

ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು.....

ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ...ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.

ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ....ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ....ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು.....

ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ....ಅದಿರಲಿ....ಆ ಸ್ತೋತ್ರ ಹನುಮಾನ ಚಾಲಿಸಾ.....

ಇನ್ನು ಅನೇಕ ಪುರಾವೆಗಳಿವೆ....ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು.......

ನನ್ನ ಭಾರತ ಶ್ರೇಷ್ಠ ಭಾರತ....

Tuesday, February 16, 2016

ರಾಷ್ಟ್ರಭಕ್ತ ಕಾರ್ಯಕರ್ತರಿಗೊಂದು ಕಿವಿಮಾತು

ರಾಷ್ಟ್ರಭಕ್ತ ಕಾರ್ಯಕರ್ತರಿಗೊಂದು ಕಿವಿಮಾತು

ಬಹುಕಾಲದ ಮನೆತನ ಆಡಳಿತದ ನಂತರ ಭಾರತಕ್ಕೊಂದು ಬದಲಾವಣೆಯ ಚಿಲುಮೆ ಅಗತ್ಯವಿತ್ತು, ಅಂದಿಗೆ ಅದು ಅನಿವಾರ್ಯವೂ ಆಗಿತ್ತು. ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಮುಂತಾದವರಿಗೆಲ್ಲ ಪರ್ಯಯವೆಂಬಂತೆ ಅಂದು “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ” ಎಂದು ಹೊರಟ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ’ಗೆ ಜನಾಶಿರ್ವಾದ ದೊರಕಿತು, ಬರೋಬ್ಬರಿ ೨೬ ಪಕ್ಷಗಳೊಂದಿಗೆ ಮೈತ್ರಿ ಮಾಡಿ ೧೯೯೮ ರಿಂದ ೨೦೦೪ರವರೆಗೆ ಸುಭದ್ರ ಸರಕಾರ ಕೊಡುವಲ್ಲಿ ವಾಜಪೇಯಿ ಯಶಸ್ವಿಯಾದರು. ಭಾರತದ ರಾಜಕಾರಣವನ್ನು ಗಮನಿಸುತ್ತಿದ್ದ ಕೆಲ ಪ್ರಖ್ಯಾತ ವಿದೇಶಿ ವಿಶ್ಲೇಷಣಾಕಾರರು “The Golden years of Indian political history is of the Vajpayee regime” ಎನ್ನುವ ಮಟ್ಟಿಗೆ ಪ್ರಶಂಶಿಸಿದ್ದು ಅವಧಿಯ ದೇಶಪರ ನಿಲುವುಗಳನ್ನು ಹಾಗು ಅಭಿವೃದ್ಧಿಪರ ಆಡಳಿತವನ್ನು ಎತ್ತಿಹಿಡಿಯುತ್ತದೆ. ಇಷ್ಟಾದರೂ ೨೦೦೪ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸೋಲಬೇಕಾಯಿತು! ಭಾರತ ಪ್ರಕಾಶಿಸುತ್ತಿದೆ ಎಂದು ವಿಶ್ವ ಮಾತಾಡಿಕೊಂಡರು ಬಿಜೆಪಿಗೆ ಭಾರತೀಯರ ಮನಗೆಲ್ಲಲಾಗಲಿಲ್ಲ. ಅಂದಿನ ಸೋಲಿಗೆ ಕಾರಣ ಕಂಡುಹುಡುಕುವ ಪ್ರಮೇಯ ಇದೀಗ ನಮ್ಮ ಮುಂದೆ ಇಲ್ಲದಿದರು ಅದರಿಂದ ರಾಷ್ಟ್ರಭಕ್ತ ಕಾರ್ಯಕರ್ತನೋರ್ವ ಮುಂಜಾಗ್ರತೆಯಿಂದ ಕಾರ್ಯವಹಿಸಬೇಕಿರುವ ಸ್ಪಸ್ಟ ಸಂದೇಶ ಲಭ್ಯವಿದೆ.
ಅಮೆರಿಕಾವನ್ನೇ ಬೆಚ್ಚಿ ಬೀಳಿಸಿತು ಪೋಕ್ರಾನ್ ಪರೀಕ್ಷೆ, ೧೯೯೮ ರ ಮೇ ತಿಂಗಳಲ್ಲಿ ಅನೇಕ ಪ್ರಬಲ ರಾಷ್ಟ್ರಗಳ ವಿರೋಧದ ನಡುವೆಯೂ ನಡೆದ ಅಣು ಸ್ಪೋಟದಿಂದ ಇಂದು ವಿಶ್ವಮಟ್ಟದಲ್ಲಿ ಭಾರತಕ್ಕೆ ಗೌರವ ಲಭಿಸಿದೆ, ಇದನ್ನೂ ಸ್ವತಹ ಕಾಂಗ್ರೆಸ್’ನ ದಿಗ್ಗಜರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಭಾರತದ ಸೈನ್ಯಕ್ಕೆ ಆನೆಬಲ ಇದ್ದರೂ, ಸೈನಿಕರಿಗೆ ಸರಕಾರದ ಬೆಂಬಲ ಅತ್ಯಗತ್ಯ, ಅದರ ಪರಿಪೂರ್ಣತೆಗೆ ಸ್ವಾತಂತ್ರೋತ್ತರ ಐವತ್ತು ವರ್ಷಗಳೇ ಬೇಕಾಯಿತು, ವಾಜಪೇಯಿ ಸರಕಾರವೇ ಬರಬೇಕಾಯಿತು ಪರಿಣಾಮವಾಗಿ ಕಾಲ್ಕೆರೆದು ಗಲಾಟೆಗೆ ಬಂದ ಪಾಕಿಸ್ತಾನಕ್ಕೆ ಕಾರ್ಗಿಲ್ನಲ್ಲಿ ತಕ್ಕ ಉತ್ತರ, ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಬದಲಾಯಿಸಲ್ಪಟ್ಟ ಭಾರತದ ಭದ್ರತಾ ನೀತಿ ಹಾಗು ವಿದೇಶಾಂಗ ನೀತಿಗಳ ಫಲವಾಗಿ ೨೦೦೪ರಲ್ಲಿ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ನಿಲುವುಗಳನ್ನು ಕೈಗೊಳ್ಳುವಂತೆ ಮಾಡಲಾಯಿತು. ಪ್ರಜಾಪ್ರಭುತ್ವವಿರುವ ಭಾರತದ ಒಂದು ಅವಿಭಾಜ್ಯ ಅಂಗವಾಗಿದ್ದರೂ ಸಹ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆವೆಂಬುದು ಮರಿಚಿಕೆಯಾಗಿತ್ತು, ದಶಕಗಳ ಕಾಂಗ್ರೆಸ್ ಸರಕಾರ ಇವ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ, ಅದರ ನಿವಾರಣೆಯೂ ಅವರಿಗೆ ಬೇಕಿರಲಿಲ್ಲ, ಅದೇನೇ ಇರಲಿ ಈ ಸಂಪ್ರದಾಯಕ್ಕೂ ಕಡಿವಾಣ ಹಾಕಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲಾರಂಭಿಸಿದ್ದು ಸಾಧನೆಯಲ್ಲದೆ ಮತ್ತೇನು. ರಾಷ್ಟ್ರೀಯ ಹೈವೇ ಅಭಿವೃದ್ದಿ ಪ್ರಾಜೆಕ್ಟ್’ನ ಮೂಲಕ ‘ಸುವರ್ಣ ಚತುಸ್ಪಥ’ ರಸ್ತೆಗಳ ನಿರ್ಮಾಣ, ಯಾವುದೇ ದೇಶದ ಬೆಳವಣಿಗೆಗೆ ಆ ದೇಶದ ರಸ್ತೆಗಳೇ ಮುಖ್ಯ, ಇದನ್ನು ಮನಗಂಡ ಅಟಲ್ಜಿ ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಹಾಗು ಮುಂಬೈ, ದೇಶದ ನಾಲ್ಕೂ ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಬೃಹತ್ ಯೋಜನೆ ರೂಪಿಸಿ ಅದರ ಸಮರ್ಥ ಅನುಷ್ಠಾನ. ಹೈದರಾಬಾದಿನಿಂದ ಬೆಂಗಳೂರಿಗೆ ಇಂದು ನಾಲ್ಕೂ-ಐದು ಗಂಟೆಯಲ್ಲಿ ಪ್ರಯಾಣಿಸಬಹುದು ಎಂದಾದರೆ ಆ ಕೀರ್ತಿ ಸಲ್ಲಬೇಕಿರುವುದು ಮಾನ್ಯ ಅಟಲ್ ಸರಕಾರಕ್ಕೆ. ಪ್ರಸ್ತುತ ಕೇಂದ್ರದ ಸಚಿವರಾಗಿರುವ ನಿತಿನ್ ಗಡ್ಕರಿಯವರಿಗು ಆಟಲ್ಜಿಯವರಿಗೂ ಉತ್ತಮ ಬಾಂಧವ್ಯ, ೧೯೯೯ ಚಳಿಗಾಲದಲ್ಲಿ ಒಂದು ದಿವಸ ಚಾ ಕುಡಿಯುವ ಸಂಧರ್ಭ ಅಟಲ್ಜಿ, “ನಿತಿನ್, ಭಾರತಕ್ಕೂ ಇಂಡಿಯಾಗೂ ಸಂಪರ್ಕ ಸಾಧನೆಯಾಗುತ್ತಿಲ್ಲ, ಭಾರತ ಇಂಡಿಯಾದೊಂದಿಗೆ ಹಾಗು ಇಂಡಿಯಾ ಭಾರತದೊಂದಿಗೆ ಬೆರೆತರೆ ಭಾರತವೂ ಬೆಳೆಯುತ್ತದೆ, ಇಂಡಿಯಾ ಕೂಡ, ಆದ್ದರಿಂದ ಇಂಡಿಯಾಗೂ ಭಾರತಕ್ಕೂ ಒಂದು ಫ್ಲೈ-ಓವರ್ ಮಾಡ್ಬೇಕು, ನೀವೊಂದು ಪ್ಲಾನ್ ತಯಾರಿಸಿ” ಆಟಲ್ಜಿಯವರ ಮಾತನ್ನು ಅರಿತ ನಿತಿನ್’ರವರು ಭಾರತಕ್ಕೂ ಇಂಡಿಯಾಗು ಎಂದರೆ ಗ್ರಾಮೀಣ ಪ್ರದೇಶಗಳಿಗೂ ಹಾಗು ನಗರ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ರೂಪಿಸುತ್ತಾರೆ, ಮಾನ್ಯ ಅಟಲ್ಜಿ ಇದನ್ನು ೨೦೦೦ರಲ್ಲಿ ಜಾರಿಗೆ ತಂದ ನಂತರ ಡಾಂಬಾರು ಕಂಡ ರಸ್ತೆಗಳೆಷ್ಟು ಎಂಬುದರ ಲೆಕ್ಕ ಸಿಗಬೇಕಿದೆ ಅಷ್ಟೇ. ಸರ್ವ ಶಿಕ್ಷಾ ಅಭಿಯಾನದ ಮೂಲಕ ಶಿಕ್ಷಣ ರಂಗದಲ್ಲಿ ಒಂದು ಕ್ರಾಂತಿಯೇ ಜರುಗಿತ್ತು, ಮಾಹಿತಿ ತಂತ್ರಜ್ಞಾನದಲ್ಲಿ ಅಂದು ಅವರು ಕೈಗೊಂಡ ಹಾಗು ಅನುಷ್ಟಾನಿಸಿದ ನೂತನ ನೀತಿಗಳ ಫಲವೇ ಇಂದಿನ ಸಾಫ್ಟ್ವೇರ್ ಬೂಮ್. ದೂರಸಂಪರ್ಕ, ಮಾನವ ಸಂಪಲ್ಮುನ, ವಿದೇಶಾಂಗ ಇತರೆ ಯಾವುದೇ ಇಲಾಖೆಯನ್ನು ಪರಿಶೀಲಿಸಿದರು ಅಟಲ್ ಸರಕಾರ, ಹಿಂದಿನ ಐವತ್ತು ವರ್ಷಗಳ ಆಡಳಿತಗಿಂತಲೂ ಎರಡು ಮೆಟ್ಟಿಲು ಮೇಲ್ಪಂಕ್ತಿಯನ್ನು ಸ್ಥಾಪಿಸಿತ್ತು, ಯಾವುದೇ ಲೆಕ್ಕಾಚಾರದಲ್ಲಿ ಅದು ಹಿಂದೆ ಬಿದ್ದಿರಲಿಲ್ಲ, ಆದರೂ ೨೦೦೪ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾರಣ ಕಾರ್ಯಕರ್ತ.
ಸೋಲಿನಿಂದ ಕಲಿಯಬೇಕಿರುವ ಪಾಠ ರಾಷ್ಟ್ರಭಕ್ತನೋರ್ವನಿಗೆ ಸಾಕಷ್ಟಿದೆ, ೨೦೦೪ರಲ್ಲಿ ಆಡಳಿತ ಬದಲಾಯಿತು, ಇದರಿಂದ ನಷ್ಟವಾಗಿದ್ದು ಅಟಲ್ ಬಿಹಾರಿ ವಾಜಪೇಯಿಯವರಿಗಲ್ಲ ಬದಲಿಗೆ ಭಾರತಕ್ಕೆ, ಯಾವುದೇ ಸಾಧನೆಗಳನ್ನು ಹಟಾತ್ ಮನೆ ಮನೆಗೆ ತಲುಪಿಸಲು ಸಾಧ್ಯವಿಲ್ಲ, ಅಂದು, ೨೦೦೪ರಲ್ಲಿ ಆದ ತಪಪು ಕೂಡ ಅಂತಹುದ್ದೇ, ಐದು ವರ್ಷಗಳ ಸಾಧನೆ ಕೇವಲ ಚುನಾವಣಾ ಪೂರ್ವ “India shining” ಪ್ರಚಾರಾಭಿಯನದ ಮೂಲಕ ತಲುಪಿಸಲು ಸಂಪೂರ್ಣವಾಗಿ ವಿಫಲ. ವಾಸ್ತವದಲ್ಲಿ ಅಂದು ಆಗಬೇಕಿದದ್ದು ಸಾಧನೆಯ ಜೊತೆ ಜೊತೆಯಲ್ಲಿಯೇ ಮನೆ ಮನ ತಲುಪಿಸುವ ಕೆಲಸ, ಆಡಳಿತದ ಜೊತೆ ಜೊತೆಯಲ್ಲಿಯೇ ಜನಜಾಗೃತಿ, ಈ ಜನಜಾಗೃತಿಗೆ ಪ್ರಚಾರ ಮಾಧ್ಯಮವಲ್ಲ ಬದಲಿಗೆ ಕಾರ್ಯಕರ್ತನೇ ಮಾಧ್ಯಮ, ದುರದೃಷ್ಟವಶಾತ್ ಅಂದು ರಾಷ್ಟ್ರಭಕ್ತ ಕಾರ್ಯಕರ್ತನೋರ್ವ ಐದು ವರ್ಷಗಳ ಕಾಲ ಫಿಲ್ದಿಗೆ ಇಳಿಯದೆ ಕೇವಲ ಚುನಾವಣಾಪೂರ್ವ ಇಳಿದ ಪರಿಣಾಮ ೨೦೦೪ರಲ್ಲಿ ಮನಮೋಹನರು ಬಂದು ಕೂತರು, ಭಾರತವೂ ಹತ್ತು ವರ್ಷಗಳ ಮಟ್ಟಿಗೆ ಕುಳಿತುಬಿಟ್ಟಿತು. ಇದೀಗ ಸರಕಾರ ಬದಲಾಗಿದೆ, ಆಟಲ್ಜಿಯವರ ಹಾದಿಯಲ್ಲಿಯೇ ಸಾಗುತ್ತಿರುವ ಮೋದಿಯವರು ಪ್ರಧಾನಿಗಳಗಿದ್ದಾರೆ, ದೇಶಪರ ಸಾಧನೆಯನ್ನು ಕೂಡ ನೂತನ ಸರಕಾರ ಮಾಡಲಾರಂಭಿಸಿದೆ.
ಅಧಿಕಾರ ಹಿಡಿದ ಮೊದಲ ನೂರು ದಿವಸಗಳಲ್ಲಿ ಒಳ್ಳೆಯ ದಿನಗಳ ಮುನ್ಸೂಚನೆ ಭಾರತಕ್ಕೆ ಸಿಕ್ಕಿದೆ. ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಮಾಡಿದ ತಮ್ಮ ಮೊದಲ ಭಾಷಣದಲ್ಲಿಯೇ, “ಈ ದೇಶದಲ್ಲಿ ಅತಿ ಹೆಚ್ಚು ಸಮಯ ದುಡಿಯುವಂತಹ ಕಾರ್ಮಿಕ ಯಾರಾದರು ಇದ್ದರೆ ಅದು ಮುಂಬರುವ ದಿನಗಳಲ್ಲಿ ನಾಗುತ್ತೇನೆ” ಎಂದು ಹೇಳಿ ಟಿಕಾಕಾರರಿಗೆಲ್ಲ, ತಮ್ಮ “ಮಾತು ತಪ್ಪದ” ಕಾರ್ಯದ ಮುಖೇನ ಉತ್ತರಿಸುತ್ತಿರುವ ಮೋದಿಯವರು ಖಂಡಿತವಾಗಿಯೂ ೧೯೯೮-೨೦೦೪ರ ಸುವರ್ಣ ವರ್ಷಗಳನ್ನು ಮರಳಿಸುತ್ತಾರೆ ಎಂಬ ಸಂಪೂರ್ಣ ಭರವಸೆ ದಿನೇ ದಿನೇ ಭಾರತಿಯರಲ್ಲಿ ಹೆಚ್ಚಾಗತೊಡಗಿದೆ, ಹಳಸಿಹೊಗಿದ್ದ ಭಾರತ-ಚೀನಾ, ಭಾರತ-ರಷಿಯ ಸಂಬಂಧಗಳು ಇದೀಗ ಗಟ್ಟಿಯಗತೊಡಗಿದೆ, ನೆರೆಹೊರೆ ರಾಷ್ಟ್ರಗಳು ಮಾತ್ರವಲ್ಲದೆ ದುರದ ಪಶ್ಚಿಮ ಹಾಗು ಪೂರ್ವದ ಹಲವಾರು ದೇಶಗಳು ಭಾರತದೊಂದಿಗೆ ಸಂಬಂಧ ವೃದ್ಧಿಗೆ ತುದಿಗಾಲಲ್ಲಿ ನಿಂತಿವೆ. ಹಣದುಬ್ಬರ ಪ್ರಮಾಣ ಇಲಿಯತೊಡಗಿದ್ದರೆ ಭಾರತದ ಜಿಡಿಪಿ ಬೃಹತ್ ಗಾತ್ರದಲ್ಲಿ ಚೇತರಿಸಿಕೊಂಡಿದೆ. ಭಾರತದ ಗಡಿ ಪ್ರದೇಶಗಳಲ್ಲಿ ವೈರಿಗಳ ಆಕ್ರಮಣ, ಅತಿಕ್ರಮಣಗಳು ಕ್ರಮೇಣ ಕಡಿಮೆ ಆಗುತ್ತಿದೆ. ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹಣ ಹೂಡಲು ತುದಿಗಾಲಲ್ಲಿ ನಿಂತಿದ್ದರೆ ಸರಕಾರದ ವಿನೂತನ “ಜನ ಧನ ಯೋಜನೆ” ಜಾರಿಯಾದ ಎರಡೇ ದಿವಸಗಳಲ್ಲಿ ೨ಕೋಟಿಗೂ ಅಧಿಕ ಖಾತೆಗಳು ತೆರೆಕಾಣುವ ಮೂಲಕ ತೀರ ಬಡ ನಾಗರಿಕನಿಗೂ ಸರಕಾರಿ ಸೌಲಭ್ಯ ದೊರೆಯುವಂತಾಗಿದೆ.ಅಂದಿನ ಸುವರ್ಣ ಚತುಸ್ಪಥದಂತೆ ನೂತನ ಚತುಸ್ಪಥ ರೈಲು ವ್ಯವಸ್ಥೆ ಮಾಡುವ ಆಲೋಚನೆ ಮೊದಿಯವರದ್ದಿದೆ. ತಮ್ಮ ಚುನಾವಣಾ ಘೋಶವನ್ನೇ ಮುಂದಿಟ್ಟುಕೊಂಡು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್”ಗಾಗಿ ಪರಿಶ್ರಮಿಸುತ್ತಿರುವ ಮೋದಿ ಮತ್ತು ತಂಡಕ್ಕೆಇದೀಗ ಬೆಂಬಲವಾಗಿ ನಿಲ್ಲಬೇಕಿರುವುದು ರಾಷ್ಟ್ರಭಕ್ತ ಕಾರ್ಯಕರ್ತರು.
ಒಂದು ದೇಶವನ್ನು ಬಲಿಷ್ಟ ದೇಶವನ್ನಾಗಿ ಪರಿವರ್ತಿಸಬೇಕಾದಲ್ಲಿ ಯಾವುದೇ ಸರಕಾರಕ್ಕಾದರೂ ಕನಿಷ್ಠ ಹತ್ತು ವರ್ಷಗಳ ಕಾಲಾವಧಿ ಅನಿವಾರ್ಯವಾಗಿ ಬೇಕಾಗುವುದು ಸಹಜ. ಇಂದಿನಿಂದ ನಾಳೆಗೆ ಮ್ಯಾಜಿಕ್ ಮಾಡಿ ಭಾರತವನ್ನು ಬಲಿಷ್ಟವನ್ನಾಗಿಸಲು ಮೋದಿ ಜಾದುಗಾರನೂ ಅಲ್ಲ, ಅವರ ಸಂಪುಟ ಸರ್ಕಸ್ ಕಂಪನಿ ಕೂಡ ಅಲ್ಲ. ನೂರು ದಿನಗಳಲ್ಲಿ ಬದಲಾವಣೆಯ ಮುನ್ಸೂಚನೆಗಳು ಕಾಣಸಿಗುತ್ತವೆ, ಒಂದೆರಡು ವರ್ಷಗಳಲ್ಲಿ ಜಾರಿಗೊಂಡ ನೂತನ ನೀತಿಗಳು ಕಾರ್ಯೋನ್ಮುಖವಾಗುತ್ತದೆ, ಐದು ವರ್ಷಗಳಲ್ಲಿ ದೀರ್ಘಾವಧಿ ಯೋಜನೆಗಳು ಜಾರಿಯಲ್ಲಿದ್ದು ಎಲ್ಲಾ ಸುಸೂತ್ರವಾಗಿ ಅನುಷ್ಟಾನಗೊಮ್ದಲ್ಲಿ ಮುಂಬರುವ ಹತ್ತು ವರ್ಷಗಳಲ್ಲಿ ಬಲಿಷ್ಟ ಭಾರತದ ಕನಸು ನನಸಾಗುತ್ತದೆ, ಈ ಹತ್ತು ವರ್ಷಗಳಲ್ಲಿ ಒಂದು ಸರಕಾರವಾಗಿ ಜನರ ವಿಶ್ವಾಸ ಉಳಿಸಿಕೊಳ್ಳುವ ಕಾರ್ಯದಲ್ಲಿ ಮೋದಿ ತಂಡ ಸಫಲವಾಗುವ ಎಲ್ಲಾ ಲಕ್ಷಣಗಳು ತೋರುತ್ತಿದೆ ಆದರೆ ಮೋದಿಯವರ ಹೆಗಲಿಗೆ ಹೆಗಲು ಕೊಡಬೇಕಿರುವುದು ರಾಷ್ಟ್ರಭಕ್ತ ಕಾರ್ಯಕರ್ತರು, ಅತ್ಯುತ್ತಮ ಸರಕಾರ ಕೊಟ್ಟ ಬಳಿಕವೂ ೨೦೦೪ರಲ್ಲಿ ಬಿಜೆಪಿ ಅಧೀಕಾರ ಬಿಡಬೇಕಾಯಿತು, , ಅಂದು ಸೋತದ್ದು ಅಟಲ್ ಬಿಹಾರಿ ವಜಪೇಯಿಯವರ ಸಾಧನೆಯಲ್ಲ ಬದಲಿಗೆ ಭಾರತ, ಅಂದು ಸೋತದ್ದು ಭಾರತೀಯ ಜನತಾ ಪಾರ್ಟಿ ಅಲ್ಲ ಬದಲಿಗೆ ರಾಷ್ಟಭಕ್ತ ಕಾರ್ಯಕರ್ತ. ಆ ತಪ್ಪು ಮತೊಮ್ಮೆ ಆದಲ್ಲಿ ದೇಶ ಕ್ಷಮಿಸದು. ಕೇಂದ್ರದ ಎಲ್ಲ ಯೋಜನೆಗಳನ್ನೂ, ದೇಶದಲ್ಲಿ ಸಾಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನೂ, ವ್ರುದ್ಧಿಗೊಲ್ಲುತ್ತಿರುವ ಅಂತರಾಷ್ಟ್ರೀಯ ಸಂಬಮ್ಧಗಳನ್ನು ಮನೆ-ಮನಕ್ಕೆ ತಲುಪಿಸಲು ೨೦೧೯ರವರೆಗೆ ಕಾಯದೆ ಕೂಡಲೇ ಚಾಲನೆಗೆ ಬರಬೇಕಿದೆ. ಸರಕಾರದ ಜತೆಯಲ್ಲಿಯೇ ಜನಜಾಗೃತಿ ಕೂಡ ಆಗಬೇಕಿದೆ, ರಾಷ್ಟ್ರ ಭಕ್ತ ಕಾರ್ಯಕರ್ತ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸಿದರೆ, ಜನಜಾಗೃತಿಯ ಹೊಣೆಯನ್ನೂ ನಾವು ಅನಿವಾರ್ಯವಾಗಿ ಹೊರಬೇಕಿದೆ.